ಚನ್ನರಾಯಪಟ್ಟಣ: ತಾಲೂಕಿನ ಹಿರಿಸಾವೆ ಹೋಬಳಿ ಗಿರೀಕ್ಷೇತ್ರ ಶ್ರೀ ಲಕ್ಷ್ಮಿವೆಂಕಟೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಬಂದ ಎರಡು ಲಕ್ಷದ ಐವತ್ತು ಸಾವಿರ ಮೊತ್ತದ ಡಿಡಿಯನ್ನು ವಿತರಣೆ ಮಾಡಲಾಯಿತು.
ಚನ್ನರಾಯಪಟ್ಟಣ ತಾಲೂಕು ಯೋಜನಾಧಿಕಾರಿ ಸದಾಶಿವ ಕುಲಾಲ್, ದಿಡಗ ವಲಯ ಮೇಲ್ವಿಚಾರಕರು ಹರೀಶ್, ಸೇವಾಪ್ರತಿನಿಧಿ ಪುಷ್ಪಲತಾ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.