ಬೇಲೂರು: ಬಿಕ್ಕೊಡು ಹೋಬಳಿಯ ಮಾಳೆಗೆರೆ ಗ್ರಾಮದ ಮಲ್ಲೇಶ್ ಗೌಡ ಎಂಬುವವರಿಗೆ ತಮ್ಮ ತಾಯಿಯಿಂದ ಬಂದ ಪಿತ್ರಾರ್ಜಿತ ಆಸ್ತಿಯಲ್ಲಿ ಸುಮಾರು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದು, ಅದರಂತೆ ಮಳೆ ಬಂದಿದ್ದ ಕಾರಣ ತಮ್ಮ ಹೊಲದಲ್ಲಿ ತಮಗೆ ಸೇರಿದ ಜಮೀನು ಸರ್ವೆ 211\1 ರ 14 ಕುಂಟೆ ಜಾಗದಲ್ಲಿ ತಮ್ಮ ಮಕ್ಕಳಾದ ಶಶಿಕುಮಾರ್, ಗೌರೀಶ್ ಹಾಗೂ ಸೊಸೆ ತೀರ್ಥ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಸಹೋದರನ ಮಗನಾದ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್, ಲೊಕೇಶ್ ಎಂಬುವವರೊಂದಿಗೆ ಗುಂಪು ಗೂಡಿ ಬಂದು ಏಕಾಏಕಿ ಕೆಟ್ಟ ಪದಗಳಿಂದ ಬೈದಿದಲ್ಲದೆ ಮಾರಣಾಂತಿಕವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದು, ಮಲ್ಲೇಶ್ ಗೌಡರ ಮೇಲೆ ಹಲ್ಲೆ ನಡೆಸಲು ಹೋದ ಸಂದರ್ಭದಲ್ಲಿ ಅಡ್ಡ ಬಂದ ಶಶಿಕುಮಾರ್ ಗೆ ಬಲವಾಗಿ ತಲೆಗೆ ಮಚ್ಚಿನಿಂದ ಹೊಡೆದ ಪರಿಣಾಮವಾಗಿ ಕೂಡಲೇ ಅಲ್ಲಿದ್ದ ಸ್ಥಳೀಯ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರ ಜೊತೆಗೆ ತೀವ್ರ ಹಲ್ಲೆಗೊಳಗಾಗಿದ್ದ ತಂದೆ ಮಲ್ಲೇಶ್ ಗೌಡ, ಅತ್ತಿಗೆ ತೀರ್ಥ, ಅಣ್ಣ ಗೌರೀಶ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಹೋದರ ಶಶಿ ಕುಮಾರ್ ನಮ್ಮ ತಂದೆ ಕಾಲದಿಂದಲೂ ಸಹ ನಮ್ಮ ಅಜ್ಜಿಯವರಿಗೆ ಬಂದಿದ್ದ ಜಮೀನನ್ನು ನಮ್ಮ ತಂದೆಯವರೇ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಆದರೆ 2016 ರಲ್ಲಿ ನಮ್ಮ ತಂದೆಗೆ ಖಾತೆ ಬದಲಾವಣೆಗೆ ಮಾಡಲು ಅರ್ಜಿ ಸಲ್ಲಿಸಿದ್ದೆವು. ಆದರೆ ಅಲ್ಲಿದ್ದಂತ ಉದೀತ್ ಎಂಬ ಅಧಿಕಾರಿ ರಾಜ ಸ್ವ-ನಿರೀಕ್ಷಕ ನಕಲಿ ದಾಖಲೆ ಸೃಷ್ಟಿಸಿ ನಮ್ಮ ಚಿಕ್ಕಪ್ಪನ ಮಕ್ಕಳಾದ ಮಧುಕುಮಾರ್ ಗೆ ಖಾತೆ ಮಾಡಲು ಹುನ್ನಾರು ನಡೆಸಿದ್ದ. ಇದನ್ನು ತಿಳಿದು ನಾವು ತಹಶೀಲ್ದಾರ್ ಅವರಿಗೆ ಈತನ ಬಗ್ಗೆ ದೂರು ನೀಡಿದಾಗ ನೀವು ಯಾವ ರೀತಿ ಖಾತೆ ಮಾಡಿಸಿಕೊಳ್ಳುತ್ತೀರಾ ಎಂದು ನಮ್ಮ ತಂದೆಯ ಮೇಲೆ ಉದೀತ್ ಅವರು ನಮಗೆ ಧಮ್ಕಿ ಹಾಕಿದ್ದ. ನಂತರ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಅಲ್ಲಿಂದ ನಮಗೆ ನ್ಯಾಯ ಸಿಕ್ಕಿದ್ದು ನಾವು ಅಂದಿನಿಂದಲೂ ಉಳುಮೆ ಮಾಡಿಕೊಂಡು ಬರುತ್ತಿದ್ದು ಆದರೆ ಕೆಲ ದಿನಗಳಿಂದ ಯಾರೋ ಈ ಕೆಲವರ ಮಾತು ಕೇಳಿ ಹಣದ ಮದದಿಂದ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿದ್ದು ಹಾಗೂ ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡಿರುವ ಅರೇಹಳ್ಳಿ ಪೊಲೀಸರು ಮಧುಕುಮಾರ್, ಚಂದ್ರೇಗೌಡ, ಕುಮಾರ್, ಗೌರೇಗೌಡ, ಲೊಕೇಶ್, ರುದ್ರೇಶ್ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿರುವ ದೃಶ್ಯ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.