ಸಕಲೇಶಪುರ: ಪಟ್ಟಣದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಹೊಸ ಬಸ್ ನಿಲ್ದಾಣ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯೊಳಗೆ ಕಾರು ನುಗ್ಗಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಪಟ್ಟಣದ ಸೆಂಟ್ ಅಗ್ನೇಸ್ ಪದವಿ ಪೂರ್ವ ಕಾಲೇಜು ಬಳಿ ಎಪಿಎಂಸಿ ಮುಂಭಾಗ ಘಟನೆ ನಡೆದಿದ್ದು ಕಾರಿನಲ್ಲಿ ಇದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಕಾರು ಅಂಗಡಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಅಂಗಡಿ ಹಾಗೂ ಕಾರು ಜಖಂಗೊಂಡಿದ್ದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ