ಹಾಸನ: ನಗರದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡಲು ತೆರಳಿದ್ದ 16 ವರ್ಷದ ಬಾಲಕನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಪೋಷಕರು ನಗರದ ಬಡಾವಣೆ ಠಾಣೆ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ನಗರದಲ್ಲಿ ವರದಿಯಾಗಿದೆ.
ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿಕ್ಷಕರಾಗಿರುವ ಹನುಮಯ್ಯ ಅವರ ಮಗ ಸುಜನ್ ಕೆ.ಆರ್ 16 ವರ್ಷ ಅವರು ಮೇ 18ರ ಗುರುವಾರ ಎಂದಿನಂತೆ ಜಿಲ್ಲಾ ಕ್ರೀಡಾಂಗಣಕ್ಕೆ ಕ್ರಿಕೆಟ್ ಆಟಕ್ಕೆ ಹೋಗಿದ್ದು ಎಷ್ಟು ಸಮಯವಾದರೂ ಬಾರದೆ ಇರುವ ಹಿನ್ನಲೆಯಲ್ಲಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.
ಸುಜನ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಕನ್ನಡ ಹಾಗೂ ಇಂಗ್ಲಿಷ್ ಮಾತನಾಡುತ್ತಾನೆ. ಇತನನ್ನು ಯಾರೋ ಅಪಹರಿಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಯಾರಿಗಾದರೂ ಮಾಹಿತಿ ದೊರೆತರೆ ಹತ್ತಿರದ ಪೊಲೀಸರಿಗಾಗಲಿ ಅಥವಾ ಹಾಸನ ಬಡಾವಣೆ ಪೊಲೀಸ್ ಠಾಣೆ 08172-268967 ಅಥವಾ 9480804730 ಸಂಪರ್ಕಿಸಲು ಕೋರಲಾಗಿದೆ.