News Karnataka
ಸಿಟಿಜನ್ ಕಾರ್ನರ್

ಪಿಯುಸಿ ಪರೀಕ್ಷೆ: ೫೯೭ ವಿದ್ಯಾರ್ಥಿಗಳು ಗೈರು

The second PUC examination has started and 597 students have absented themselves from the first day of the kannada exam in Hassan.
Photo Credit : Bharath

ಹಾಸನ: ದ್ವಿತೀಯ ಪಿಯುಸಿ ಪರೀಕ್ಷೆಯು ಇಂದಿನಿಂದ ಆರಂಭಗೊಂಡಿದ್ದು, ಪ್ರಥಮ ದಿನವಾದ ಕನ್ನಡ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು ೧೪,೭೪೩ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ ೧೪,೧೪೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೫೯೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪ.ಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹಾಲಿಂಗಯ್ಯ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೩೧ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು, ಮೊದಲ ದಿನ ಯಾವ ರೀತಿಯೂ ತೊಂದರೆ ಇಲ್ಲದಂತೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇದರಿಂದ ಯಾವುದೇ ಡಿಬಾರ್ ಆದ ಪ್ರಕರಣಗಳು ವರದಿಯಾಗಿಲ್ಲ.

ಹಾಸನದಲ್ಲಿ ೧೭೩ ವಿದ್ಯಾರ್ಥಿಗಳು, ಅರಸೀಕೆರೆ- ೧೨೦, ಚನ್ನರಾಯ ಪಟ್ಟಣ – ೧೪೨, ಅರಕಲಗೂಡು – ೬೨, ಹೊಳೆನರಸೀಪುರ -೪೯, ಬೇಲೂರು – ೨೦, ಆಲೂರು -೮ ಹಾಗೂ ಸಕಲೇಶಪುರದಲ್ಲಿ ೨೩ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೯೭ ವಿದ್ಯಾ ರ್ಥಿ ಗಳು ಗೈರು ಹಾಜರಾಗಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *